ನಾಳೆಗಳ ಕುರಿತು ಭಯವುಳ್ಳವರೆಲ್ಲ ಬದುಕನ್ನು ಯಾಂತ್ರಿಕವಾಗಿ ನಡೆಸುತ್ತಾರೆ, ಆದರೆ ಕುತೂಹಲವುಳ್ಳವರು ಮಾತ್ರ ಸಂಭ್ರಮದಿಂದ ಆಚರಿಸುತ್ತಾರೆ ......! - pramod srinivasa
Monday, May 31, 2010
ಮೌನದ ನಿಟ್ಟುಸಿರಿನ ಕಂಪನ....ಎದೆಯಾಳದಲಿ !!!!!!!
ಮೂರು ಜನ ಸ್ನೇಹಿತರು .... ಅನಘ,, ಆರ್ಯ,, ಅರ್ಜುನ್,, ....
ಅನಘ ...ಬಹಳ ಸೂಕ್ಷ್ಮ ಸ್ವಭಾವದ ಹುಡುಗಿ ... ಪ್ರೀತಿ ಸ್ವಲ್ಪ ಜಾಸ್ತಿನೆ ..ಸ್ನೇಹಮಯಿ.. ಕರುಣೆ ದಯೆ ಕೂಡ..ತಂದೆ ತಾಯಿಗೆ ಒಬ್ಬಳೆ ಮಗಳಾದ ಕಾರಣ ತುಂಬ ಪ್ರೀತಿಯಿಂದ ಸಾಕಿದ್ದರು .ತಂದೆ ತಾಯಿ ಎಷ್ಟೆ ಮುದ್ದು ಮಾಡಿದರು ಅನಘ ಎಂದಿಗು ದಾರಿ ತಪ್ಪಿದವಳಲ್ಲ.. ಬಹಳ ಜವಾಬ್ದಾರಿಯುತ ಹುಡುಗಿ...
ಅರ್ಜುನ್.... ಒಂತರ ಪಕ್ಕಾ practical ಮತ್ತೆ materialistic type ಹುಡುಗ .... ಭಾವನೆಗಳಿಗೆ ಅಷ್ಟು ಬೆಲೆ ಕೊಟ್ಟವನಲ್ಲ .... ದೊಡ್ಡ ಮನೆತನದಲ್ಲಿ ಹುಟ್ಟಿದವನಾದ್ದರಿಂದ...ದಯೆ ಕರುಣೆ ಮನುಷ್ಯತ್ವ ಇದರ ಅರ್ಥವೆ ತಿಳಿಯದೆ ಬೆಳೆದ ಹುಡುಗ.. ಆ ಗುಣಗಳು ಅವನಿಗೆ ರಕ್ತದಲ್ಲೆ ಬಂದಿತ್ತೆಂದರೆ ತಪ್ಪಾಗುವುದೇನೊ..... ತಪ್ಪು ಅವನದಲ್ಲ ಅವನು ಬೆಳೆದ ಪರಿಸರ ಅಂತದ್ದು ...ಒಬ್ಬನೆ ಮಗನಾದ್ದರಿಂದ ಬಹಳ ಪ್ರೀತಿಯಿಂದ ಮುದ್ದಿನಿಂದ ಬೆಳೆಸಿದ್ದರು .. ಅದಕ್ಕೆ ಏನೊ ಅವನು ಚಿಕ್ಕಂದಿನಿಂದಲು ಬಹಳ ಹಠಮಾರಿಯಾಗಿದ್ದ..... ಇಷ್ಟ ಪಟ್ಟದ್ದು ಸಿಗುವವರೆಗು ಬಿಡುತ್ತಿರಲಿಲ್ಲ ... ಸ್ನೇಹಿತರೆಂದರೆ ಬಹಳ ಪ್ರೀತಿ ... ಸ್ನೇಹಕ್ಕಾಗಿ ಏನು ಬೇಕಾದರು ಮಾಡುವಂತವನಾಗಿದ್ದ...
ಇನ್ನು ಆರ್ಯ .. ..ನಾಲ್ಕು ತಿಂಗಳ ಮಗುವಾಗಿದ್ದಾಗ ಅವನ ತಂದೆ ತಾಯಿ ಅವನನ್ನು ಅನಾಥಾಲಯದಲ್ಲಿ ಹೇಳದೆ ಕೇಳದೆ ಬಿಟ್ಟು ಹೋಗಿದ್ದರು... ಅನಾಥಾಲಯದ ಮುಖ್ಯಸ್ತರಾದ ಹಾಲಪ್ಪನವರು ಅವನನ್ನು ಸಾಕಿ ಬೆಳೆಸಿದ್ದರು...ಯಾರೊ ಒಬ್ಬ ಅನಾಮಧೇಯ ಮಹನೀಯ ಆರ್ಯ ನ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುತ್ತಿದ್ದ ..ಆರ್ಯ ಅನಾಥಾಲಯದ ಮಗುವಾದ ಮೇಲೆ ಅವನ ಕರ್ಚು ವೆಚ್ಚಗಳನ್ನು ಭರಿಸಲು ಪ್ರತಿ ತಿಂಗಳು ತಪ್ಪದೆ ಹಣವನ್ನು ಆ ಅನಾಮಿಕ ವ್ಯಕ್ತಿ ಕಳಿಸುತ್ತಿದ.. ಆದರೆ ಆ ಮಹನೀಯ ಯಾರು ಎಂಬುದು ಹಾಲಪ್ಪನವರಿಗಾಗಲಿ ಆರ್ಯನಿಗಾಗಲಿ ಗೊತ್ತಿರಲಿಲ್ಲ. ಆ ಸಹಯಾರ್ಥಿಯನ್ನು ಹುಡುಕಲು ಇಬ್ಬರು ಬಹಳ ಪ್ರಯತ್ನಪಟ್ಟಿದ್ದರು ಆದರು ಯಾವುದೆ ಉಪಯೋಗವಾಗಿರಲಿಲ್ಲ..
ಆರ್ಯ ಬಹಳ ವಿಭಿನ್ನ ವಿಚಿತ್ರವಾದ ಹುಡುಗ... ತಂದೆ ತಾಯಿ ಇದ್ದು ಅನಾಥನಾಗಿ ಇರಬೇಕಾದ ಪರಿಸ್ಥಿತಿ ಅವನನ್ನು ಛಿದ್ರ ಮಾಡುತ್ತಿತ್ತು... ಅವನಿಗೆ ಚಿಕ್ಕಂದಿನಿಂದಲು ತಂದೆ ತಾಯಿಯ ಮೇಲೆ ಬಹಳ ತಿರಸ್ಕಾರವಿತ್ತು ಕೋಪವಿತ್ತು ...ನನ್ನನ್ನು ಏಕೆ ಬಿಟ್ಟು ಹೋದರು ??? ನಾನು ಮಾಡಿದ ತಪ್ಪಾದರು ಏನು ???? ಎಂಬ ಪ್ರಶ್ನೆಗಳು ಅವನನ್ನು ಬಹಳವಾಗಿ ಕಾಡುತ್ತಿದ್ದವು... ಇದೆ ಕಾರಣಕ್ಕೊ ಏನೊ ... ಆರ್ಯ ಮೊದಲಿಂದಲು ಹೋರಾಟದ ಸ್ವಭಾವವನ್ನು ಬೆಳೆಸಿಕೊಂಡ....ತನ್ನ ಸ್ವಂತ ಪ್ರತಿಭೆಯಿಂದಲೆ ಮುಂದೆ ಬಂದ ... ಬದುಕಿನಲ್ಲಿ ಬಹಳಷ್ಟು ಕನಸುಗಳನ್ನು ಹೊತ್ತ ಹುಡುಗ....ಭಾವಜೀವಿ ....ಬಾಲ್ಯದಲ್ಲೆ ಬದುಕಿನಲ್ಲಿ ಸಹಜವಾಗಿ ಇರಬೇಕಾದ ಸಂಭಂಧಗಳಿಗೆ ದೂರವಾದ ಕಾರಣಕ್ಕೆ ಏನೊ .... ಯಾರನ್ನು ಅಷ್ಟು ಹಚ್ಚಿಕೊಂಡವನಲ್ಲ .... ಎಲ್ಲರಿಗು ದೂರವಾಗಿ ಏಕಾಂಗಿಯಾಗೆ ಬೆಳೆದ ... ವಿಚಿತ್ರವಾದ ಸಂಗತಿಯೆಂದರೆ ಬದುಕಿನಲ್ಲಿ ಸಂಭಂಧಗಳ ಬೆಲೆ ಮತ್ತು ಅದರ ಮಹತ್ವದ ಅರಿವು ಅವನಿಗೆ ಆಳವಾಗಿತ್ತು...
intermediate ಓದಬೇಕಾದರೆ ಆರ್ಯನಿಗೆ ಅನಘಳ ಪರಿಚಯವಾಯಿತು .... ಕ್ರಮೇಣ ಇಬ್ಬರು ಒಳ್ಳೆಯ ಸ್ನೇಹಿತರಾದರು ...ಅನಘಳಿಗೆ ಆರ್ಯನ ಮೇಲೆ ವಿಷೇಶ ಪ್ರೀತಿ ಅಭಿಮಾನ ಇತ್ತು ... ಅವನ ಛಲ ಉತ್ಸಾಹ ಅವಳಿಗೆ ಅವನ ಮೇಲೆ ವಿಷೇಶ ಗೌರವವನ್ನು ಮೂಡಿಸಿತ್ತು... ಆದರೆ ಆರ್ಯನಿಗೆ ಅವಳು ಒಬ್ಬ ಒಳ್ಳೆಯ ಸ್ನೇಹಿತೆಯಷ್ಟೆ !!!!!!!
ಹಾಗೆಯೆ ಕಾಲಚಕ್ರ ತಿರುಗಿತು ..ಅನಘ ಆರ್ಯನಿಗೆ ಮೊದಲಿಗಿಂತಲು ಹತ್ತಿರವಾಗಿದ್ದಳು .... ತನ್ನೆಲ್ಲ ವಿಷಯಗಳನ್ನು ಅವನ ಹತ್ತಿರ ಹೇಳ್ತ ಇದ್ಲು ..ಅವಳಿಗೆ ಅವನ ಮೇಲೆ ಪ್ರೀತಿ ಅಭಿಮಾನ ಇನ್ನು ಹೆಚ್ಚಾಗಿತ್ತು .... intermediate ಆದ ಮೇಲೆ .... ಆರ್ಯನಿಗೆ ಮದ್ರಾಸಿನ university ಅಲ್ಲಿ scholarship ಸಿಗಲು ... ಹೊರಡಲು ಅಣಿಯಾದನು...ಮೊಟ್ಟಮೊದಲ ಬಾರಿಗೆ ಆರ್ಯನಿಗೆ ಅನಘಳ ಸ್ನೇಹನ miss ಮಡ್ಕೊತಿನೇನೊ ಅನ್ನೊ ಭಾವನೆ ಬಂದಿತ್ತಾದರು..nothing is permanent in life, one or the other day u have to live without somethings ಅಂತ ಹಾಲಪ್ಪನವರು ಬಾಲ್ಯದಲ್ಲಿ ಹೇಳಿದ ಮಾತು ಜ್ಞಾಪಕಕ್ಕೆ ಬರಲು ... ಅವನು ದುಖಃವನ್ನು ತೊರ್ಪಡಿಸದೆ ನಗುತ್ತಲೆ ವಿದಾಯ ಹೇಳಿದನು ... ಆದರೆ ಅನಘಳ ಕಣ್ಣುಗಳು ಮಾತ್ರ ತೇವವಾಗಿದ್ದವು ... ಆರ್ಯನ ಅನುಪಸ್ಥಿತಿ ಕೆಲದಿನಗಳ ಮಟ್ಟಿಗೆ ಅನಘಳನ್ನು ಕಾಡಿತ್ತಾದರು .. ಅವಳಿಗೆ ಪ್ರತಿಷ್ಟಿತ college ಒಂದರಲ್ಲಿ seat ಸಿಗಲು ..ಮತ್ತೆ ಅವಳ ಗಮನ ವಿದ್ಯಾಭ್ಯಾಸದ ಕಡೆಗೆ ಹರಿಯಿತು ... ಆಗ ಅವಳ ಬದುಕಿನಲ್ಲಿ ಬಂದವನೆ ಅರ್ಜುನ್........
ಅನಘ ಅರ್ಜುನ್ ಇಬ್ಬರು classmates...ಕಾಲ ಸರಿದಂತೆ ಅರ್ಜುನ್ ಹಾಗು ಅನಘ ಒಳ್ಳೆಯ ಸ್ನೇಹಿತರಾದರು ... ಅರ್ಜುನನಿಗಂತು ಅನಘ ಬಹಳ ಅಚ್ಚುಮೆಚ್ಚಿನ ಗೆಳತಿ..ಅರ್ಜುನ್ ಅನಘಳ ಮನೆಯವರಿಗು ಹತ್ತಿರದವನಾದ ...ಅರ್ಜುನ್ ಅನಘಳ ಸ್ನೇಹ ಎಷ್ಟು ಗಾಢವಾಗಿತ್ತೆಂದರೆ ಅವನು ಅವಳನ್ನು sister ಅಂತಲೆ ಕರೆಯುತ್ತಿದ್ದ.... ಅನಘ ಕೂಡ ಅವನಲ್ಲಿ ಸ್ನೇಹಿತನಿಗಿಂತ ಮಿಗಿಲಾಗಿ ಅಣ್ಣನನ್ನು ಕಂಡಿದ್ದಳು...ಕಾಲಂತರದಲ್ಲಿ ಆರ್ಯನ ಅನುಪಸ್ಥಿತಿಯ ನೋವು ಅನಘಳಿಗೆ ಕಡಿಮೆಯಾಗಿತ್ತು ..ಆದರೆ ಅವನ ಮೇಲಿದ್ದ ಪ್ರೀತಿ ಮಾತ್ರ ದುಪ್ಪಟ್ಟು ಹೆಚ್ಚಾಗಿತ್ತು !!!! ...ಆದರೆ ಅರ್ಜುನ ಹೊರನೋಟಕ್ಕೆ ಮಾತ್ರ ಅನಘಳನ್ನು ತಂಗಿಯ ಸ್ಥಾನದಲ್ಲಿ ನೋಡಿದ್ದ ..ಅವನ ಮನಸ್ಸಿನ ಭಾವವೆ ಬೇರೆಯಾಗಿತ್ತು... ಅವನು ಅನಘಳನ್ನು ತುಂಬ ಪ್ರೀತಿಸಿದ್ದ ... ಅಣ್ಣನ ದೃಷ್ಟಿಯಿಂದಲ್ಲ ಪ್ರಿಯತಮನ ದೃಷ್ಟಿಕೋನದಿಂದ... sister ಎನ್ನುವ ಬಾಯಿಮಾತಿನ ಸಂಭಂಧ ಅವನು ಅವಳಿಗೆ ಹತ್ತಿರವಾಗಲು ಬಳಸಿದ ಒಂದು ಕಾರಣವಷ್ಟೆ....ಹೀಗೆ ವರುಷಗಳು ಉರುಳಿದವು
ಬಹಳ ದಿನಗಳ ನಂತರ ಆರ್ಯ ಮತ್ತೆ ಬೆಂಗಳೂರಿಗೆ ನೌಕರಿ ಸಲುವಾಗಿ ಬಂದ.... ಕೈ ತುಂಬ ಸಂಬಳ ಬರುತ್ತಿದ್ದರು ಆರ್ಯ ಮತ್ತೆ ಅದೆ ಅನಾಥಾಶ್ರಮದಲ್ಲಿ ವಾಸ ಮಾಡತೊಡಗಿದ .... ಅಷ್ಟೆ ಅಲ್ಲದೆ ಅವನಂತಹ ಅನಾಥರಿಗೆ ದಾರಿದೀಪವಾದ....ಆರ್ಯ ಮತ್ತೆ ಬಂದದ್ದು ಅನಘಳಿಗೆ ತುಂಬ ಸಂತೋಷವನ್ನು ಉಂಟುಮಾಡಿತ್ತು ... ಕ್ರಮೇಣ ಅರ್ಜುನ್ ಆರ್ಯನಿಗು ಒಳ್ಳೆಯ ಸ್ನೇಹಿತನಾದ ....
ಆರ್ಯನಿಗೆ ಪ್ರತಿ ತಿಂಗಳು ತಪ್ಪದೆ ಹಣ ಬರುತ್ತಲೆ ಇತ್ತು ... ಕಳೆದ ೨೫ ವರ್ಷಗಳಿಂದ ... ಆ ಹಣವನ್ನು ಅವನು ಅನಾಥಾಲಯದ ಮಕ್ಕಳಿಗೆ ವಿನಿಯೋಗಿಸುತ್ತಿದ್ದ ... ಆದರೆ ಹಣ ಕಳಿಸುತ್ತಿದ್ದ ವ್ಯಕ್ತಿಯನ್ನು ಹುಡುಕಲು ಮಾತ್ರ ಅವನಿಂದ ಆಗಿರಲಿಲ್ಲ ...ಕೊನೆಗು ಒಂದು ದಿನ ಅವನಿಗೆ ಹಣದ ಜೊತೆಗೆ ಒಂದು ಪತ್ರ ಬಂದಿತು ..... ಅದರಲ್ಲಿ ಕಾಗದ ತಲುಪಿದ ತಕ್ಷಣ ಹೊರಟುಬರಬೇಕಾಗಿ ಬರೆದಿತ್ತು ... address ಕೊಳ್ಳೆಗಾಲದ ಒಂದು ಕುಗ್ರಾಮ....
ಮೊದಲಿನಿಂದಲು ಆರ್ಯ ಯಾರೊ ಶ್ರೀಮಂತ ವ್ಯಕ್ತಿ ಹಣವನ್ನು ಕಳಿಸುತ್ತಿರಬೇಕು ಎಂದೆ ಭಾವಿಸಿದ್ದ .... ಈ ಕಾಗದ ನೋಡಿದ ಕೂಡಲೆ ಅವನಿಗೆ ಬಹಳ ಸಂತೊಷವು ಆಯಿತು ಹಾಗೆ ಅದ್ದ್ರೆಸ್ಸ್ ನೋಡಿ ತುಸು ಆಶ್ಚರ್ಯವು ಆಯಿತು .. ಮಾರನೆಯ ದಿನವೆ ಆರ್ಯ ಕೊಳ್ಳೆಗಾಲಕ್ಕೆ ಪ್ರಯಾಣ ಬೆಳೆಸಿದ.. ಅವನಿಗೆ ಹಿಂದೆಂದು ಆಗದ ಸಂತೋಷ ಸಂಭ್ರಮ ... ತನ್ನ ಇಂದಿನ ಪರಿಸ್ಥಿತಿಗೆ ಕಾರಣನಾದ ಮಹಾನುಭಾವನನ್ನು ನೋಡುವ ಅವಕಾಶ ತಾನಾಗಿಯೆ ಬಂದಿತ್ತು .... !!!!!!
ಅನಾಮಿಕ ವ್ಯಕ್ತಿಯ ಹುಡುಕಿಕೊಂಡು ಹೋದ ಆರ್ಯನಿಗೆ ಒಂದು ದೊಡ್ಡ ಆಘಾತವೆ ಕಾದಿತ್ತು.... ಪತ್ರದಲ್ಲಿ ಇದ್ದ address ಆ ಊರಿನ ಜಮೀನುದಾರನದು ... ಅವನು ಆ ಮನೆಯ ಕದ ತೆರೆದು ಒಳ ಹೊಕ್ಕನು .... ಹಾಸಿಗೆಯ ಮೇಲೆ ಒಬ್ಬ ವಯಸ್ಸಾದ ವ್ಯಕ್ತಿ ಈಗಲೊ ಆಗಲೊ ಅನ್ನೊ ತರ ಮಲಗಿದ್ದು ಕಂಡಿತು ... ಪಕ್ಕದಲ್ಲೆ ಒಬ್ಬ ಹೆಣ್ಣುಮಗಳು ವಯಸ್ಸಾದ ವ್ಯಕ್ತಿಯ ಶುಷ್ರೂಶೆ ಮಾಡುತ್ತಿದ್ದಳು ... ಆರ್ಯನನ್ನು ಕಂಡು ಆ ವ್ಯಕ್ತಿಯು ಬಾ ಮಗನೆ ಬಾ ....ಕೊನೆಗೂ ನನ್ನ ಚಿತೆಗೆ ಬೆಂಕಿ ಇಡಲು ನೀನೆ ಬೇಕಾದೆ ಮಗು ಎಂದ..!!! ಅವನ ಮಾತುಗಳನ್ನು ಕೇಳಿ ಆರ್ಯ ತನ್ನ ಕಿವಿಗಳನ್ನು ತಾನೆ ನಂಬದೆ ಹೋದ...ಹೌದು ಹಾಸಿಗೆಯ ಮೇಲೆ ಕೊನೆಯುಸಿರೆಳೆಯುತ್ತಿದ್ದ ಆ ಜೀವ ಆರ್ಯನ ತಂದೆಯೆ !!!!!! ... ಆರ್ಯನ ತಂದೆ ನಡೆದ ವಿಷಯವನ್ನೆಲ್ಲ ಮಗನಿಗೆ ವಿವರಿಸಿದರು ..... ಆರ್ಯನು ಹುಟ್ಟಿದ್ದು ಅನಿಷ್ಟ ನಕ್ಷತ್ರವೊಂದರಲ್ಲಿ ...ಅವನು ಇದ್ದ ಮನೆಯಲ್ಲಿ ನಷ್ಟ ಸಾವು ನೋವು ಕಟ್ಟಿಟ್ಟ ಬುತ್ತಿ ಅಂತ ಅವನ ಜಾತಕ ನೋಡಿದ ಜ್ಯೊತಿಷಿ ಹೇಳಿದ್ದರು ... ಇದಕ್ಕೆ ಪರಿಹಾರವೆ ಇಲ್ಲ ಅವನು ಹುಟ್ಟಿದ ಘಳಿಗೆ ಅಂತಹುದು.... ಇದನ್ನು ಮೀರಿ ನಡೆದರೆ ಮನೆಯ ಹಿರಿಯನ ಅಕಾಲ ಮರಣವು ಸಂಭವಿಸಬಹುದು ಆದ್ದರಿಂದ ಅವನನ್ನು ಶಾಶ್ವತವಾಗಿ ದೂರ ಇಡುವುದೆ ಸೂಕ್ತ ಎಂದು ಪಂಡಿತರು ಹೇಳಿದರಂತೆ ....ಈ ಗೊಡ್ಡು ನಂಬಿಕೆಗೆ ಬಲಿಯಾದ ಆರ್ಯನ ತಂದೆ ತಾಯಿ ಅವನನ್ನು ಅನಾಥಾಲಯದ ಮುಂದೆ ಸುರಕ್ಷಿತವಾದ ಸ್ಠಳದಲ್ಲಿ ಬಿಟ್ಟು ಹೋಗಿದ್ದರು .... ಪ್ರತಿ ತಿಂಗಳು ಆರ್ಯನಿಗೆ ಹಣವನ್ನು ಕಳಿಸುತ್ತಿದ್ದುದು ಅವನ ತಂದೆಯೆ ..... ಆಗಾಗ್ಗೆ ಯಾರಿಗು ತಿಳಿಯದ ಹಾಗೆ ಅವನ ಯೋಗಕ್ಷೇಮವನ್ನು ಇತರರಿಂದ ತಿಳಿಯುತ್ತಿದ್ದರು ... ಇಷ್ಟು ಕೇಳುವಷ್ಟರಲ್ಲಿ ಆರ್ಯನಿಗೆ ಆಗಲೆ ತಲೆ ಸುತ್ತಿ ಬಂದಿತ್ತು ..... ಕಳೆದ ೨೫ ವರ್ಷಗಳಿಂದ ಅತಿಯಾಗಿ ದ್ವೇಷಿಸಿದ್ದ ವ್ಯಕ್ತಿಯು ಅತಿಯಾಗಿ ಗೌರವಿಸಿದ್ದ ವ್ಯಕ್ತಿಯು ಇಬ್ಬರು ಒಂದೆ ಆದ ಸತ್ಯವನ್ನು ಅವನಿಂದ ಸ್ವೀಕರಿಸಲು ಸಾಧ್ಯವಾಗಲೆ ಇಲ್ಲ .... ಸ್ವಲ್ಪ ಹೊತ್ತು ನಿಂತಲ್ಲೆ ಸ್ಥಬ್ಧವಾಗಿ ನಿಂತುಬಿಟ್ಟನು.... ಅಷ್ಟರಲ್ಲಿ ಅವನ ತಂದೆಯ ಪ್ರಾಣ ಹಾರಿಹೋಗುವ ಸಮಯ ಬಂದಾಗಿತ್ತು .... ಅವರು ಹತ್ತಿರ ಬಾ ಮಗು ಅಂತ ಕರೆದು ... ಇವಳು ನಿನ್ನ ತಂಗಿ ಎಂದು ಆ ಹೆಣ್ಣು ಮಗಳ ಕಡೆ ಕೈ ಮಾಡಿ ತೊರಿಸುವಷ್ಟರಲ್ಲಿ ಪ್ರಾಣ ಹೊರಟುಹೋಗಿತ್ತು .... ಆ ಹೆಣ್ಣು ಮಗು ಬಿಕ್ಕಿ ಬಿಕ್ಕಿ ಅಳತೊಡಗಿದಳು...ಆರ್ಯ ಯಾವುದೆ ಭಾವನೆಗಳನ್ನು ತೋರಿಸುವ ಪರಿಸ್ಥಿತಿಯಲ್ಲಿರಲಿಲ್ಲ .... ಅವನು ಮೌನಕ್ಕೆ ಶರಣಾಗಿದ್ದನು .... ಅವನ ಮನಸ್ಸಿನ ತುಂಬೆಲ್ಲ ..... ಅನಿಷ್ಟದ ಮಗು ....ಕೊನೆಗೂ ನನ್ನ ಚಿತೆಗೆ ಬೆಂಕಿ ಇಡಲು ನೀನೆ ಬೇಕಾದೆ ಮಗು ..ಇವಳು ನಿನ್ನ ತಂಗಿ.. ಈ ಮಾತುಗಳೆ ಪ್ರತಿಧ್ವನಿಸುತ್ತಿದವು ..ಅವನು ಅತಿಯಾಗಿ ದ್ವೇಷಿಸುತ್ತಿದ್ದ ತಾಯಿಯು ಅವನ ತಂಗಿಯ ಹೆರಿಗೆಯಲ್ಲೆ ಅಸುನೀಗಿದಳು ಎನ್ನುವ ವಿಷಯ ಅವನಿಗೆ ಇನ್ನಷ್ಟು ಕಸಿವಿಸಿಯನ್ನುಂಟುಮಾಡಿತ್ತು ..ಅವನ ಮನಸ್ಸಿನಲ್ಲಾಗುತ್ತಿದ್ದ ಭಾವನೆಗಳ ನಡುವಿನ ಕದನ ಅವನನ್ನು ಇನ್ನಷ್ಟು ಘಾಸಿಗೊಳಿಸಿದ್ದವು..ದೇವರೆ ಯಾಕೆ ಈ ನರಕ ... ಈ ಸತ್ಯ ನಾನು ಸಾಯುವವರೆಗು ತಿಳಿಯದೆ ಹೋಗಿದ್ದರೆ ಚೆನ್ನಾಗಿತ್ತು ಎಂದು ಕೂಗಿತ್ತು ಅವನ ಹೃದಯ ... ತಂದೆಯ ಉತ್ತರಕ್ರಿಯೆಗಳನ್ನು ಮಾಡಿ ಮುಗಿಸಿದ ಆರ್ಯ ತಂಗಿಯನ್ನು ಕರೆದುಕೊಂಡು ಬೆಂಗಳೂರಿಗೆ ವಾಪಸಾದನು ....
ಈ ಘಟನೆಯಿಂದ ಹೊರಬರಲು ಆರ್ಯನಿಗೆ ಬಹಳ ದಿನಗಳೆ ಹಿಡಿದವು..ನನ್ನವರು ಅನ್ನೋರು ಒಬ್ಬರಾದು ಇದಾರಲ್ಲ ಅನ್ನೊ ಸಂತೋಷಕ್ಕಿಂತ ಹಳೆಯ ದಿನಗಳ ಕಹಿನೆನಪುಗಳೆ ಅವನಿಗೆ ಹೆಚ್ಚು ದುಖಃವನ್ನುಂಟುಮಾಡಿದ್ದವು...... ಇದಾದ ೩ ತಿಂಗಳ ನಂತರ ...ಅನಘಳಿಗೆ ಅವಳ ಮನೆಯಲ್ಲಿ ಅವಳ ಮದುವೆಯ ವಿಷಯ ಪ್ರಸ್ತಾಪಕ್ಕೆ ಬರಲು ..ಅವಳು ಹೆಚ್ಚು ತಡ ಮಾಡಬಾರದೆಂದು ಯೋಚಿಸಿ,,, ಆರ್ಯನಿಗೆ ತನ್ನ ಪ್ರೀತಿಯ ಬಗೆಗೆ ಹೇಳಲು ನಿರ್ಧರಿಸಿದಳು .. ಒಂದು ದಿನ ಅನಘ ಆರ್ಯನಿಗೆ ತನ್ನ ಪ್ರೀತಿಯನ್ನು ತೋರ್ಪಡಿಸಿದಳು .. ನಿನ್ನನ್ನು ಇಷ್ಟ ಪಡುತ್ತಿದೇನೆ ... i love u we will marry ಕಣೊ ... ಅಂತ ಹೇಳಿದಳು...ಅವಳ ಈ ಅನಿರೀಕ್ಷಿತ ಮಾತುಗಳನ್ನು ಕೇಳಿ ಆರ್ಯನಿಗೆ ಆಶ್ಚರ್ಯ ಹಾಗು ಬೇಸರವಾಯಿತು .... ಅವನು ಅವಳ ಪ್ರೀತಿಯನ್ನು ಸವಿನಯದಿಂದಲೆ ತಿರಸ್ಕರಿಸಿ .... ನಾನು ಎಂದಿಗು ನಿನ್ನನ್ನು ಆ ಭಾವನೆಯಿಂದ ನೋಡಿಯೆ ಇಲ್ಲ ...ನೀನು ನನಗೆ ಒಳ್ಳೆಯ ಸ್ನೇಹಿತೆಯಷ್ಟೆ ..ಸ್ನೇಹ ಪ್ರೀತಿ ಎರಡು ಒಂದೆ ಅಲ್ಲ..ಈ ಸಂಭಂಧಕ್ಕೆ ಹೊಸ ಅರ್ಥವನ್ನು ನೀಡಿ ಅದರ ಪಾವಿತ್ರತೆಯನ್ನು ಹಾಳು ಮಾಡಬೇಡ ಎಂದು ಹೇಳಿ ಹೊರಟುಹೋದನು...ವರ್ಷಗಳಿಂದ ಅವಳ ಮನಸ್ಸಿನಲ್ಲಿ ಅಗಾಧವಾಗಿ ಬೆಳೆದಿದ್ದ ಪ್ರೀತಿಯನ್ನು ಕ್ಷಣಾರ್ಧದಲ್ಲಿ ತಿರಸ್ಕರಿಸುತ್ತಾನೆ ಅಂತ ಅನಘ ಕನಸಿನಲ್ಲು ಊಹಿಸಿರಲಿಲ್ಲ .... ದುಖಃವ ತಡೆಯಲಾರದೆ ನಿಂತಲ್ಲೆ ಕುಸಿದಳು..ಆರ್ಯನಲ್ಲದೆ ಬೇರೆ ಯಾರನ್ನು ಆ ಸ್ಠಾನದಲ್ಲಿ ಕಲ್ಪಿಸಿಕೊಳ್ಳಳು ಅವಳು ಸಿದ್ಧಳಿರಲಿಲ್ಲ ....ಆಗ best friends can be very good couples ಅಂತ ಅವಳ ತಂದೆ ಹೇಳುತ್ತಿದ್ದ ಮಾತು ನೆನಪಿಗೆ ಬರಲು ..... ಅವಳು ಈ ವಿಷಯವನ್ನು ಅಪ್ಪ ಅಮ್ಮನಿಗೆ ಅರ್ಜುನನಿಗೆ ತಿಳಿಸಿ ... ಅವರ ಮುಖಾಂತರ ಆರ್ಯನನ್ನು ಹೇಗಾದರು convince ಮಾಡಬೇಕು ಅಂತ ಯೋಚಿಸಿ..ತಕ್ಷಣ ಅರ್ಜುನನಿಗೆ phone ಮಾಡಿದಳು ... phone receive ಮಾಡಿದ ಅರ್ಜುನ ನಿನಗೊಂದು ವಿಷಯ ಹೇಳಬೇಕು ನಿಮ್ಮ ಮನೆಯಲ್ಲೆ ಇದ್ದೇನೆ ಬೇಗ ಬಾ ಅಂತ ಹೇಳಿ ...phone cut ಮಾಡಿಬಿಟ್ಟ...ಸ್ವಲ್ಪ ಸಮಧಾನದ ನಿಟ್ಟುಸಿರು ಬಿಡುತ್ತ ಸರಸರನೆ ಮನೆಯ ಕಡೆಗೆ ಹೆಜ್ಜೆ ಹಾಕಿದಳು ಅನಘ .....ಆದರೆ ಮನೆಯಲ್ಲಿ ಅವಳಿಗೆ ಕಾದಿದ್ದ ಅಘಾತದ ಸುಳಿವು ಕೂಡ ಅವಳಿಗಿರಲಿಲ್ಲ
ಇದರ ಮಧ್ಯೆ ಅನಘಳ ತಂದೆ ತಾಯಿ ಅನಘ ಹಾಗು ಅರ್ಜುನನ ಮದುವೆಯ ವಿಷಯವನ್ನು ಅರ್ಜುನನ ತಂದೆ ತಾಯಿಯ ಹತ್ತಿರ ಪ್ರಸ್ತಾಪಿಸಿದ್ದರು ..... ಅರ್ಜುನನ ತಂದೆ ತಾಯಿಗೆ ಯಾವುದೆ ಅಭ್ಯಂತರವಿರಲಿಲ್ಲ ... ಅರ್ಜುನ ಕೂಡ ಅನಘಳಿಗೆ ಇಷ್ಟವಾದರೆ ನನಗು ಇಷ್ಟ ಎಂದೆ ಹೇಳಿದ್ದ..... ಆದರೆ ಸೋಜಿಗದ ಹಾಗು ವಿಪರ್ಯಾಸದ ಸಂಗತಿಯೆಂದರೆ ... ಅರ್ಜುನ್ ಅನಘಳನ್ನು sister ಅಂತ ಕರೆಯುತ್ತಿದುದಾಗಲಿ .... ಅನಘ ಅರ್ಜುನನ್ನು ಅಣ್ಣನ ಸಮಾನ ಭಾವಿಸಿದ್ದಾಗಲಿ... ಅರ್ಜುನನ ಪೋಷಕರಿಗೆ ಅನಘಳ ಪೋಷಕರಿಗೆ ತಿಳಿದಿರಲಿಲ್ಲ ..... ಇವರಿಬ್ಬರ ನಡುವಿನ ಸ್ನೇಹವೊಂದೆ ಅವರಿಗೆ ತಿಳಿದಿದ್ದ ಸತ್ಯ !!!!!
ಅನಘ ಮನೆಗೆ ಬಂದಾಗ.... ಅವಳ ತಂದೆ ತಾಯಿ ಅರ್ಜುನ್ ಅವರ parents ಎಲ್ಲ ಲೊಕಾಭಿರಾಮವಾಗಿ ಮಾತಾಡುತ್ತಿದ್ದರು....ಅವಳು ಬಂದದ್ದನ್ನು ಗಮನಿಸಿದ ಅರ್ಜುನ್ ನೇರವಾಗಿ ಅವಳ ಹತ್ತಿರ ಬಂದು ... i love u ..... will you marry me ಅಂತ ಹೇಳಿದ ... ಆಗ ಅನಘಳ ತಂದೆ.... ಹೌದಮ್ಮ ಅರ್ಜುನ್ ನಮಗೆಲ್ಲರಿಗು ಬಹಳ ಇಷ್ಟವಾಗಿದ್ದಾನೆ... ನೀನು ಅವರಿಗೆಲ್ಲ ಇಷ್ಟವಾಗಿದ್ದಿಯ ... ನೀನು ಒಪ್ಪಿದರೆ ನಿಮ್ಮಿಬ್ಬರ ಮದುವೆ ಬೇಗ ಮುಗಿಸಿಬಿಡೋಣ ಎಂದರು...ಅನಘಳಿಗೆ ಅರ್ಜುನನ ಮಾತು ಕೆನ್ನೆಗೆ ಯಾರೊ ಬಾರಿಸಿದ ಹಾಗಾಯಿತು .. ದುಃಖ ಉಮ್ಮಳಿಸಿ ಬಂತು .... ಅವಳ ಮನಸ್ಸಿಗೆ ಯಾರೊ ನೇಣು ಹಾಕಿದ ಹಾಗಾಯಿತು .. ಅಣ್ಣ ಅನ್ನೋ ಭಾವನೆನ ಕೊಲೆ ಮಾಡಿಬಿಟ್ಟನಲ್ಲ ಇವನಿಗೆ ಮನಸ್ಸಾದರು ಹೇಗೆ ಬಂತು ... ಇವನು ಮನುಷ್ಯನೇನ ??? ಇದೆ ರೀತಿಯ ಪ್ರಶ್ನೆಗಳು ಅವಳನ್ನ ಕಾಡಕ್ಕೆ ಶುರು ಮಾಡಿತು ... ಅವರ ಯಾರ ಮಾತುಗಳಿಗು ಉತ್ತರಿಸದೆ ಹಾಗೆ ಸೀದ ತನ್ನ ರೂಮಿಗೆ ಹೊರಟುಹೋದಳು ... ಅವಳ ತಂದೆ ತಾಯಿ ನಾಚಿಕೆ ಇಂದ ಹೊರಟಿರಬೇಕು ಅಂದುಕೊಂಡರು...ಆದರೆ ಅರ್ಜುನನ ಮಾತುಗಳು ಅವಳನ್ನ ಎಷ್ಟು hurt ಮಾಡಿತ್ತು ಅನ್ನೋದು ಅವಳಿಗೆ ಗೊತ್ತಿತ್ತು ... ಮೆಚ್ಚಿದ ಹುಡುಗ ಆರ್ಯ ಇನ್ನು ತನಗೆ ಸಿಗೋದು ಸಾಧ್ಯನೆ ಇಲ್ಲ ಅನ್ನೋದು ನಿಶ್ಚಯವಾಯಿತು... ಅಣ್ಣನ ಸ್ಥಾನದಲ್ಲಿ ನೋಡಿದ ಗೆಳೆಯನನ್ನ ಮದುವೆ ಆಗೋಕೆ ಯಾರ ಮನಸ್ಸು ತಾನೆ ಒಪ್ಪುತ್ತೆ ..... ಅನಘ ಎರಡು ಕಾಗದ ಬರೆದು table ಮೇಲೆ ಇಟ್ಟಳು....
-----------------------------------------------------------------------------------
ಒಂದು ಚಿತೆ ಉರಿತ ಇತ್ತು ..... ಅಲ್ಲೆ ಹತ್ತಿರದಲ್ಲಿ ಆರ್ಯ ಚಿತೆಯನ್ನೆ ದಿಟ್ಟಿಸಿ ನೋಡುತ್ತಿದ್ದ ... ಅವನ ತಂದೆ ಮರಣಿಸಿದಾಗಲೆ ಅಳದವನ ಕಣ್ಣುಗಳು ತೇವವಾಗಿದ್ದವು ... ಅವನ ಕೈಯಲ್ಲಿ ಒಂದು ಕಾಗದ .. ಅದರಲ್ಲಿ ಬರೆದಿದ್ದುದು...
" ನಾನು ಹೆಸರಿಗೆ ಮಾತ್ರ ಅನಘ... ವಾಸ್ತವದಲ್ಲಿ ಅನಘ ನೀನು ಗೆಳೆಯ .... ಕ್ಷಮೆ ಇರಲಿ "
ಚಿತೆಯಿಂದ ದೂರದಲ್ಲಿ ಅರ್ಜುನ್ ಕೂಡ ನಿಂತಿದ್ದ .... ಅವನ ಕೈಯಲ್ಲು ಒಂದು ಕಾಗದವಿತ್ತು ... ಅವನ ಮುಖದಲ್ಲಿ ವಿಷಾದದ ಭಾವವಿತ್ತು ...
" ಅಣ್ಣ ಎನುವ ... ಮಧುರ ಭಾಂಧವ್ಯಕೆ
ಪ್ರೀತಿಯ ಹೆಸರಲಿ... ಮಸಿಬಳಿದ ಗೆಳೆಯನೆ
ನಿನೀ ಕ್ರೌರ್ಯವೆ...ವಿಷವಾಗಿ ನನ್ನುಸಿರ ಕೊಲ್ಲುತಿರೆ
ಮೌನದ ಮಡುವಿನಲಿ ...ಕಂಬನಿ ಮಿಡಿದಿದೆ
ನನ್ನ ಹೃದಯ ....ನನ್ನ ಹೃದಯ ...
ಅರ್ಜುನನಿಗೆ ಅವನ ತಪ್ಪಿನ ಅರಿವಾಗಿತ್ತೋ ಇಲ್ಲವೊ ...ಕಾಲವಂತು ಮಿಂಚಿಹೋಗಿತ್ತು ....
ಇಬ್ಬರ ಮನದಲ್ಲು ಉಳಿದುದೊಂದೆ ... ಮೌನದ ನಿಟ್ಟುಸಿರಿನ ಕಂಪನ !!!!!!!!
- first story written by an amateur writer
pramod gowda
Tuesday, May 25, 2010
KITES - DISGUSTING movie of recent times